== ಚುನಾವಣಾ ವಿವರಗಳು == 1967ರ ಲೋಕಸಭಾ ಚುನಾವಣೆ, ಈ ಹಿಂದೆ ನಡೆದ ಎಲ್ಲಾ ಚುನಾವಣೆಗಳಿಗೆ ಹೋಲಿಸಿದರೆ ವಿಭಿನ್ನವಾಗಿತ್ತು. ಲೋಕಸಭಾ ಕ್ಷೇತ್ರಗಳ ಸಂಖ್ಯೆ 494ರಿಂದ 520ಕ್ಕೆ ಏರಿಕೆಯಾಯಿತು. ಭಾರತದ ಮೊದಲ ಇಬ್ಬರು ಪ್ರಧಾನಮಂತ್ರಿಗಳಾದ ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರಿ ಇವರಿಬ್ಬರ ಸ್ಥಾನವನ್ನು ನೆಹರೂ ಅವರ ಪುತ್ರಿ ಇಂದಿರಾ ಗಾಂಧಿ ಸಮರ್ಥವಾಗಿ ತುಂಬಿದ್ದರಾದರೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಾಧನೆ ಈ ಚುನಾವಣೆಯಲ್ಲಿ ಸ್ವಲ್ಪ ಕೆಳಮುಖವಾಗಿತ್ತು. ಜೊತೆಗೆ ಕಾಂಗ್ರೆಸ್ ಪಕ್ಷದ ಭದ್ರನೆಲೆಗಳಾಗಿದ್ದ ಮದ್ರಾಸ್ ರಾಜ್ಯ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಕ್ಷ ಗಮನಾರ್ಹ ಸೋಲು ಕಂಡಿತು. ಸಿ. ರಾಜಗೋಪಾಲಾಚಾರಿಯವರು ಸ್ಥಾಪಿಸಿದ ಸ್ವತಂತ್ರ ಪಾರ್ಟಿ ಗುಜರಾತ್, ಮದ್ರಾಸ್, ಒರಿಸ್ಸಾ, ರಾಜಸ್ಥಾನ, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರಬಲ ಪೈಪೋಟಿ ನೀಡಿ ಗೆದ್ದು ಬೀಗಿತು. ರಾಜಧಾನಿ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳು ಭಾರತೀಯ ಜನಸಂಘಕ್ಕೆ, ಉಳಿದ ಏಕೈಕ ಕ್ಷೇತ್ರ ಕಾಂಗ್ರೆಸ್ ಪಕ್ಷದ ಪಾಲಾಯಿತು. === ಸಂಸದರ ಪಟ್ಟಿ === == ಉಲ್ಲೇಖಗಳು == == ಕೊಂಡಿಗಳು ==